[ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆ - ೨ ಮೇ ೨೦೧೩]
ಬೆಳಗಿನ ಜಾವ ಬೀದಿ ದೀಪಗಳು ಸೂರ್ಯನ
ಜೊತೆ ಸುಖಾಸುಮ್ಮನೆ ಜಟಾಪಟಿಗೆ ಇಳಿದಿದ್ದರೆ, ಇತ್ತ ರಮಾಕಾಂತನ ಅಲಾರ್ಮ್ ಇಡೀ ವಠಾರಕ್ಕೆ ಕೇಳಿಸುವಂತೆ
ಕೂಗಿಕೊಂಡಿತ್ತು. ಅವನ ಮನೆಯ ಗೋಡೆಗೆ ತಾಕಿಕೊಂಡಿರುವ ಪಕ್ಕದ ಮನೆಯ ಜೋರು ಬಾಯಿಯ ಹೆಂಗಸು ಶಾಂತಮ್ಮ 'ಪ್ರಳಯ ಆದ್ರೂ ಇವನ ಅಲಾರ್ಮ್
ಮಾತ್ರ ದಿನಾ ಹೊಡೆದುಕೊಳ್ಳೋದು ನಿಲ್ಲಲ್ಲ.. ಥೂ ಇವನ..." ಅಂತ ಬೆಳ್ಳಂಬೆಳಗ್ಗೆ ಸುಪ್ರಭಾತ ಹಾಡಿದ್ದಳು. ಮನಸ್ಸಿಲ್ಲದ ಮನಸ್ಸಲ್ಲಿ ಎದ್ದು, ಅಲಾರ್ಮ್ ಆಫ್ ಮಾಡಿ ಬಿ ಕಾಮ್ ಓದುತ್ತಿರುವ ಮಗ ಇವತ್ತಾದರೂ
ಬೇಗ ಎದ್ದು ಓದಬಹುದೆಂಬ ಆಶಾವಾದದಿಂದ ಅವನನ್ನ ಎಬ್ಬಿಸಿದ. 'ಹತ್ತು ನಿಮಿಷ ಇರು.. ಎದ್ದೆಳ್ತಿನಿ..
ಕಿರುಚಿಕೊಬೇಡ... ' ಅಂತ ಮಗ ಕಿರುಚಿ ಮತ್ತೆ ಮಲಗಿದ. ಅಪ್ಪನೆದುರು ರೇಗುವುದು ತನ್ನ ಆಜನ್ಮ ಸಿದ್ಧ ಹಕ್ಕು ಎಂಬಂತೆ ರಮಾಕಾಂತ ಏನು ಮಾತಾಡಿದರೂ ಗಟ್ಟಿ ದನಿಯಲ್ಲಿ ಉತ್ತರಿಸುವುದು ಅವನ ಅಭ್ಯಾಸವಾಗಿತ್ತು. ಇನ್ನೊಮ್ಮೆ ಮಗನೆದುರು ಏನಾದರು ಕೇಳಬೇಕೆಂದರೆ ಎಲ್ಲಿ ತನ್ನ ಮೇಲೆ ರೇಗುತ್ತಾನೋ ಎಂದು ಯಾವುದನ್ನೂ ಎರಡನೇ ಬಾರಿ ಅವನ ಬಳಿ ಹೇಳುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಹತ್ತು ನಿಮಿಷವಾದ ಬಳಿಕವೂ ಮಗ ಎದ್ದೇಳುವ ಯಾವ ಸೂಚನೆಯೂ ಕಾಣದಾದಾಗ ಮತ್ತೆ ಅವನನ್ನ ಎಬ್ಬಿಸಬೇಕೆನಿಸಲಿಲ್ಲ. ಅಥವಾ ಧೈರ್ಯ ಸಾಲಲಿಲ್ಲ.
ನಿನ್ನೆ ಮಾಡಿದ ಚಿತ್ರಾನ್ನವನ್ನ ಡಬ್ಬಕ್ಕೆ ಹಾಕಿಕೊಂಡು ಮಗನಿಗೊಂದಿಷ್ಟು ಇಟ್ಟ, ಈ ಚಳಿಯಲ್ಲಿ
ಸ್ನಾನ ಮಾಡುವುದು ಒಳ್ಳೆಯದಲ್ಲ, ಬಂದು ಮಾಡಿದರಾಯ್ತು ಎಂದು ತನಗೆ ತಾನೇ ನೆಪ ಹೇಳಿಕೊಂಡ. ಒಳಗಿನ ಕೋಣೆಯ ಕಿಟಕಿಗೆ ನೇತು ಹಾಕಿರುವ ಶರ್ಟು ತೊಳೆಯದೇ ೫ ದಿನ ಆಗಿರುವುದು ನೆನಪಾಯಿತು. ಅದನ್ನೇ ಇನ್ನೊಂದು ದಿನ ಹಾಕಿ ಇವತ್ತು ಸಂಜೆ ಮನೆಗೆ ಬಂದವನೇ ಅದನ್ನ ತೊಳೆದುಹಾಕಬೇಕೆಂದು ನಿರ್ಧರಿಸಿದ. ಪ್ಯಾಂಟು ಮುದ್ದೆಯಾಗಿತ್ತು. ಅದರ ಮೇಲೆ ಕೈಯಿಂದ ಇಸ್ತ್ರಿ ಮಾಡಿ ಇವತ್ತಿಗೆ ಇಷ್ಟು ಸಾಕೆಂಬಂತೆ ತನ್ನ ಸೊಂಟಕ್ಕೆ ನೇತುಹಾಕಿಕೊಂಡ. ಇರುವ ಎರಡು ಸಾಕ್ಸ್ ಜೊತೆ, ಒಂದು ತೊಳೆಯಲು ಹಾಕಿದ್ದು ಅಲ್ಲೇ ಇದೆಯೆಂದು ನೆನಪಾಗಿ ಮತ್ತೊಂದು ಸಾಕ್ಸ್ ವಾಸನೆ ಹೊಡೆಯುತ್ತಿಲ್ಲವೆಂದು ಎರಡು ಬಾರಿ ಮೂಸಿ ನೋಡಿ ಖಚಿತಪಡಿಸಿಕೊಂಡು, 'ರಮೇಶ... ಎದ್ದು ಬಾಗಿಲು ಹಾಕ್ಕೋ... ' ಎಂದು ಇನ್ನೂ ಮಲಗಿರುವ ಮಗನಿಗೆ ಹೇಳಿ ವಠಾರ ದಾಟಿ ಮೇನ್ ರೋಡ್ ಗೆ ಬಂದು ಬಸ್ ಗೆ ಕಾದು ನಿಂತ.
ಚಳಿಗಾಲದ ಬೆಳಗಿನ ಶಿಫ್ಟ್ ಅವನಿಗಿಷ್ಟ. ಎದ್ದ ಕೂಡಲೇ ಚಳಿ ಎನಿಸಿದರೂ ಏಳು ಎಂಟು ಗಂಟೆಯಾಗುತ್ತಿದಂತೆ, ಸೂರ್ಯ ಕಿರಣಗಳು ತಂಪು ಗಾಳಿಯ ಜೊತೆ ಬೆರೆತು ಮೈಗೆ ಹಿತ ಎನಿಸುತ್ತಿತ್ತು. ರಾತ್ರಿ ಕೊರೆಯುವ ಚಳಿಯಲ್ಲಿ ಕೂರುವುದಕ್ಕಿಂತ ಬೆಳಗಿನ ಚಳಿ ಮಜವೆನಿಸುತ್ತಿತ್ತು. ಸಮಯಕ್ಕೆ ಸರಿಯಾಗಿ ITPL ಕಡೆ ಹೋಗುವ
ಬಸ್ ಬರುತ್ತಿದ್ದಂತೆ, ತನ್ನ ಇವತ್ತಿನ ದಿನ ಚೆನ್ನಾಗಿದೆಯೆಂದು ಎಣಿಸಿ ಕಂಪನಿಯ ಒಳಹೊಕ್ಕ. ಎಂದಿನಂತೆ ಎಲ್ಲಾ
ಮಹಡಿಯ, ಎಲ್ಲಾ ಕೋಣೆಯ ಅನವಶ್ಯಕ ದೀಪಗಳನ್ನಾರಿಸಿ ಬೇಸ್‌ಮೆಂಟ್ನಲ್ಲಿ ನಡೆಯುವ ಮೀಟಿಂಗ್ ಗೆ ಬಂದು ಸಾಲಲ್ಲಿ
ನಿಂತ. ತನ್ನ ತಿಳಿನೀಲಿ ಯೂನಿಫಾರ್ಮ್ನ ಇನ್ಶರ್ಟ್ ಒಮ್ಮೆ ಸರಿ ಮಾಡಿಕೊಂಡು, ಐ ಡಿ ಕಾರ್ಡ್ ನಲ್ಲಿ
ಬರೆದಿದ್ದ 'ರಮಾಕಾಂತ ಗೌಡ.. ಬ್ಲೂ ಸ್ಟಾರ್ ಸೆಕ್ಯೂರಿಟೀ...' ಹೆಸರನ್ನ ದಿನಚರಿಯಂತೆ ಮತ್ತೊಮ್ಮೆ ಓದಿದ. ತನ್ನ ತಿಳಿ ನೀಲಿಯ ಅಂಗಿಯ ಜೇಬಿನ ಮೇಲಿದ್ದ ಘಾಡ ನೀಲಿ ಬಣ್ಣದ ನಕ್ಷತ್ರದ ಚಿಹ್ನೆ ಎಂದಿನಂತೆ ಉತ್ಸಾಹ ತುಂಬಿತು. ಅದನ್ನೊಮ್ಮೆ ನೋಡಿ ಸೆಕ್ಯುರಿಟಿ ಕೆಲಸ, ಯಾವುದೇ ಪೋಲೀಸ್ ಕೆಲಸದವನಿಗೂ ತಾನೆನೂ ಕಮ್ಮಿಯಿಲ್ಲ ಅಂದುಕೊಂಡು ಪೂರ್ತಿ
ದಿನ ನಿಂತು ಮಾಡಬೇಕಾದ ಕೆಲಸಕ್ಕೆ ಸ್ಪೂರ್ತಿ ತಂದುಕೊಂಡ.
ಈ ಕಂಪನಿಗೆ ಸೆಕ್ಯುರಿಟಿ
ಗಾರ್ಡ್ ಆಗಿ ಕೆಲಸ ಮಾಡುವ ಮೊದಲು ಎ ಟಿ ಎಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಮಾಕಾಂತ. ಎ ಟಿ ಎಂ ಕೆಲಸ ಮೊದಮೊದಲು ಅವನಿಗೆ ವಿಚಿತ್ರ ಅನ್ನಿಸತೊಡಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಮ್ಮನೇ ತನ್ನ ಪಾಡಿಗೆ ತಾನು ಕೂತಿರುತಿದ್ದ. ಜನ ಅವರ ಪಾಡಿಗೆ ಅವರು ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು. ಪಕ್ಕದಲ್ಲಿದ್ದ ದರ್ಶಿನಿಯಲ್ಲಿ ಹೊತ್ತುಹೊತ್ತಿಗೆ ಚಾ ಕುಡಿಯುವುದು, ದಿನಕ್ಕೆರಡು ಬಾರಿ ಕಸ ಗುಡಿಸುವುದು ಬಿಟ್ಟರೆ ವಾರದಲ್ಲೆರಡು ದಿನ ಎ ಟಿ ಎಂ ನಲ್ಲಿ ದುಡ್ಡಿಲ್ಲ, ಹಾಳಾಗಿದೆ ಎಂದು ಜನರನ್ನ ವಾಪಸ್ ಕಳಿಸುವುದೇ ಅವನ ಮುಖ್ಯ ಕೆಲಸವಾಗಿತ್ತು. ದುಡ್ಡಿಲ್ಲದ ಸಿಟ್ಟಿಗೆ ಜನ ಬಾಂಕ್ ಗೆ, ಇವನಿಗೆ ಹಿಡಿಶಾಪ ಹಾಕಿ ಗೊಣಗುತ್ತಾ ಹೋಗುತ್ತಿದ್ದರು. ಹೀಗೆ ಒಂದು ದಿನ ಕಸ ಗುಡಿಸುತ್ತಿದ್ದವ ಅಲ್ಲಿ ಬಿದ್ದಿರುವ ಮಿನಿ ಸ್ಟೇಟ್ಮೆಂಟ್ ಕೈಗೆತ್ತಿಕೊಂಡ. ಸಮಯ ಹೇಗೂ ಕಳೆಯುತ್ತಿರಲಿಲ್ಲ. ಕುತೂಹಲಕ್ಕಾಗಿ ಎಲ್ಲವನ್ನೂ ನೋಡುತ್ತಾ ಹೋದ. ಐನೂರು, ಸಾವಿರ, ನಲವತ್ತು ಸಾವಿರ, ಎರಡು ಸಾವಿರ, ನಾಲ್ಕು ಲಕ್ಷ ಹೀಗೆ ದುಡ್ಡೇ ಇಲ್ಲದ ಅಕೌಂಟ್ನಿಂದ ಹಿಡಿದು ಲಕ್ಷಗಟ್ಟಲೇ ದುಡ್ಡಿರುವ ಸ್ಲಿಪ್ಗಳು ಕಣ್ಣಿಗೆ ಬೀಳುತ್ತಿತ್ತು. ಏನಾದರೂ ಮಾಡಿ ತಾನೂ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾ ಅಂತ ಆಲೋಚನೆಯಲ್ಲಿ ಮುಳುಗಿಹೋಗಿರುತ್ತಿದ್ದ.
ಅದಕ್ಕೂ ಮುಂಚೆ ರಮಾಕಾಂತ ಏನು ಮಾಡುತ್ತಿದ್ದ ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಸಿಕ್ಕಾಪಟ್ಟೆ ಕುಡಿಯುತ್ತಿದ್ದ, ಅವನ ಹೆಂಡತಿ ಅವನ ಕುಡಿತ ತಾಳಲಾರದೆ ಕಂಡಕ್ಟರ್ ಒಬ್ಬನ ಜೊತೆ ಓಡಿ ಹೋದಳು ಅನ್ನೋ ಸುದ್ದಿ ಹಬ್ಬಿತ್ತು. ಯಾರಾದರೂ ಅದರ ಬಗ್ಗೆ ಕೇಳಿದರೆ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಆದರೆ ಸಿಟ್ಟನ್ನ ತೋರಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಇವನ ಮಗನೂ ಇವನೆದುರಿಗೆ ಕುಡಿಯಲು ಪ್ರಾರಂಬಿಸಿದ್ದನಂತೆ. ಅದನ್ನು ನೋಡಿ ಅವಮಾನವಾಗಿ ಮಗನಿಗೂ ಬೈದು ತಾನೂ ಕುಡಿತ ಬಿಟ್ಟು ಈ ಕೆಲಸಕ್ಕೆ ಸೇರಿಕೊಂಡಿದ್ದ ಅನ್ನೋ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿತ್ತು. ಹೇಗೆ ಬಿಟ್ಟ, ಯಾಕೆ ಬಿಟ್ಟ ಅನ್ನುವ ಬಗ್ಗೆ ವದಂತಿಗಳಿದ್ದರೂ ಅವನು ಕುಡಿತ ಬಿಟ್ಟಿದ್ದು ಮಾತ್ರ ಅವನ ವಠಾರದವರಿಗೆಲ್ಲ ಆಶ್ಚರ್ಯವಾಗಿತ್ತು. ಇದೆಷ್ಟು ದಿನದ ಆಟವೋ ಇದನ್ನೂ ನೋಡೇಬಿಡೋಣ ಅಂದುಕೊಂಡಿದ್ದರು ಒಂದಿಷ್ಟು ಜನ. ತನ್ನ ಗಂಡನಿಗೂ ಹೀಗೆ ಸಾಕ್ಷಾತ್ಕಾರವಾದಲ್ಲಿ ತನಗೆ ದಿನಾ ಒದೆ ಬೀಳುವುದು ತಪ್ಪಬಹುದು ಅಂತ ಶಾಂತಮ್ಮ ಗಂಡನಿಗೆ ಬೆಳಗೆಲ್ಲಾ ಉಪದೇಶ ಮಾಡುತ್ತಿದ್ದಳು. ಆ ಸಿಟ್ಟಿಗೆ ಅವಳ ಗಂಡ ಮತ್ತೊಂದಿಷ್ಟು ಕುಡಿದು ಬರುತ್ತಿದ್ದ. ಉಪದೇಶ ಕೊಟ್ಟಷ್ಟು ಜಾಸ್ತಿ ಒದೆ ಬೀಳುತ್ತಿತ್ತು.
ಒಂದು ದಿನ ಅಚಾನಕ್ಕಾಗಿ ಅದೇ ಏರಿಯಾದಲ್ಲಿದ್ದ ಸಿನಿಮಾ ನಟಿಯೊಬ್ಬಳು ಅಲ್ಲಿ ದುಡ್ಡು ತೆಗೆಯಲು ಬಂದಾಗ ಅಚ್ಚರಿ ಕಣ್ಣುಗಳಲ್ಲಿ ಅವಳನ್ನ ನೋಡಿದ್ದ. ಅವನಿಗೆ ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ. ಒಂದು ಸಲ್ಯೂಟ್ ಹೊಡೆದು, 'ಮೇಡಂ .. ನಿಮ್ಮನ್ನ ನೋಡಿದ್ದು ನನ್ನ ಅದೃಷ್ಟ ಮೇಡಂ ..' ಎಂದವನೇ ಸೆಕ್ಯೂರಿಟೀ ಹಾಜರಿ ಪುಸ್ತಕದ ಕೊನೆಯ ಹಾಳೆ ತೆಗೆದು 'ಏನಾರ ಒಂದು ಲೈನ್ ಬರೆದು, ಆಟೋಗ್ರಾಫ್ ಹಾಕಿ ಮೇಡಂ.." ಎಂದು ಹೇಳಿ ಅವಳ ಮುಂದಿಟ್ಟಿದ್ದ. ಆ ನಟಿಮಣಿ ಅಲ್ಲೊಂದು ಗೆರೆ ಗೀಚಿ ಸಾಕೆನಪ್ಪ ಇಷ್ಟು ಉದ್ದದ ಲೈನ್ ಅಂತ ಹೇಳಿ ನಕ್ಕಿದ್ದಳು. "ಮೇಡಂ .. ತಮಾಷಿ ಮಾಡಬ್ಯಾಡಿ ಒಂದು ಸಾಲು.. ಏನಾರ ಬರೀರಿ.. " ಅಂತ ಅಂಗಲಾಚಿದ್ದ. ಕೊನೆಗೂ 'ಒಲವು..' ಅವಳ ಮೊದಲ ಸಿನೆಮಾದ ಹೆಸರನ್ನಷ್ಟೇ ಬರೆದು ಸಹಿ ಹಾಕಿದ್ದಳು ಆ ಸಿನೆಮಾ ನಟಿ. ಅವಳನ್ನ ಭೇಟಿಯಾಗಿದ್ದು ಅವನಿಗೆ ಹೇಳತೀರದ ಸಂಭ್ರಮವಾಗಿತ್ತು. ಅದರಲ್ಲೂ ಏನೋ 'ಲವ್ವು' ಅಂತ ಬರೆದಿರುವುದು ಓದಿ ಅವತ್ತು ಅವನಿಗೆ ವಿಚಿತ್ರ ಸಂಭ್ರಮ. ಮನೆಗೆ ಹೋಗಿ ತನ್ನ ಮಗನಿಗೆ, ವಠಾರದವರಿಗೆ ಇದನ್ನ ವಿವರಿಸುವ ತನಕ ವಿರಮಿಸುವ ವ್ಯವಧಾನವಿರಲಿಲ್ಲ. ಕೊಂಚ ಹೊತ್ತು ಆಕಾಶದಲ್ಲಿ ತೇಲಾಡಿ ಭೂಮಿಗೆ ಮರಳಿದವನೇ ಅವಳ ಅಕೌಂಚ್ನಲಿ ಎಷ್ಟು ದುಡ್ಡಿರಬಹುದು ಎಂಬ ಕುತೂಹಲ ತಡೆಯದಾದ. ಅವನನ್ನು ನೋಡಿದ ಸಂಭ್ರಮದಲ್ಲಿ ಮಿನಿ ಸ್ಟೇಟ್ಮೆಂಟ್ ಅಲ್ಲೇ ಎಸೆದಳೋ, ಹರಿದು ಹಾಕಿದಳೋ ತಿಳಿಯದೇ ಅದರ ಹುಡುಕಾಟಕ್ಕೆ ಬಿದ್ದಿದ್ದ. ಕೊನೆಗೂ ಅದ್ಯಾವುದೆಂದು ಗೊತ್ತಾಗದೇ, ಇಪ್ಪತ್ತು ಲಕ್ಷ ಇದ್ದ ಒಂದು ಸ್ಲಿಪ್ ನೋಡಿ ಅದೇ ಅವಳದಿರಬೆಕೆನ್ದು ಊಹಿಸಿ ಆ ಸಿನಿಮಾ ನಟಿಯ ಬಳಿ ಎಷ್ಟು ದುಡ್ಡಿದೆ ಎಂಬುದು ತನಗೆ ಗೊತ್ತಿದೆ ಎಂದು ಸಿಕ್ಕಿದವರ ಮುಂದೆ ಕೊಚ್ಚಿಕೊಳ್ಳತೊಡಗಿದ. ತನ್ನ ಐದು ಸಾವಿರ ಸಂಬಳ ಎಷ್ಟು ವರ್ಷ ದುಡಿದರೆ ಇಷ್ಟಾಗಬಹುದೆಂದು ಲೆಕ್ಕ ಹಾಕಿ ತನ್ನ ಸ್ಥಿತಿಗೆ ಮರುಗುತ್ತಿದ್ದ.
ಕೊನೆಕೊನೆಗೆ ಈ ಸ್ಟೇಟ್ಮೆಂಟ್ ನೋಡುವ ಅವನ ಖಯಾಲಿ ಎಲ್ಲಿ ತನಕ ಬಂತೆಂದರೆ, ಯಾರಾದರೂ ಬರುತ್ತಿದ್ದಂತೆ ಅವರ ಚಹರೆ, ಡ್ರೆಸ್ಸು, ಸ್ಟೈಲು ನೋಡಿ ಅವರು ಎಷ್ಟು ದುಡ್ಡಿಟ್ಟಿರಬಹುದೆಂದು ಊಹೆ ಮಾಡುತ್ತಿದ್ದ. ಅವರು ಹೋಗುತ್ತಿದ್ದಂತೆ, ಡಸ್ಟ್‌ಬಿನ್ನಿಂದ ತೆಗೆದ ಸ್ಲಿಪ್ ನೋಡಿ, ತನ್ನ ಊಹೆ ಸರಿಯಿದ್ದರೆ ಮನಸಲ್ಲೇ ಬೀಗುತ್ತಿದ್ದ. ಹೀಗೆ ಬರಬರುತ್ತಾ ರಾತ್ರಿ ಮಲಗಿದರೆ ಸಾಕು, ದುಡ್ಡಿನ ಕಟ್ಟು ಮನೆಯಲ್ಲಿ ಯಾರೋ ತಂದು ಇಟ್ಟನ್ತೆ, ಎ ಟಿ ಎಂ ಕಳುವು ತಾನೇ ಮಾಡಿದಂತೆ, ಯಾರನ್ನೋ ದೋಚಿದಂತೆ ಕನಸು ಬೀಳಲಾರಂಭಿಸಿದವು. ಬೆಳಿಗ್ಗೆ ಹೊತ್ತಲ್ಲಿ ತಾನು ಕೆಟ್ಟ ಯೋಚನೆ ಮಾಡುತ್ತಿರುವುದರಿಂದಲೇ ಈ ರೀತಿ ಕನಸು ಬೀಳುತ್ತಿದೆ ಎಂದೆನಿಸಿ ತನ್ನ ಯೋಚನೆ ಧಾಟಿಯೇ ಅಸಹ್ಯವೆನಿಸಿ, ಈ ದುಡ್ಡಿನ ಪ್ರಪಂಚದಿಂದ ಹೇಗಾದರೂ ಹೊರಬಂದರೆ ಸಾಕೆಂದು ತನ್ನ ಕೆಲಸದ ಜಾಗ ಬದಲಾಯಿಸಿ ಎಂದು ಸೂಪರ್‌ವೈಸರ್ ಬಳಿ ಗೋಗರೆದಿದ್ದ. ಅಂತೂ ಇಂತೂ ಆರು ತಿಂಗಳಾದ ನಂತರ ಸಾಫ್ಟ್‌ವೇರ್ ಕಂಪನಿಗೆ ಸೆಕ್ಯೂರಿಟೀ ಗಾರ್ಡ್ ಆಗಿ ಅವನಿಗೆ ವರ್ಗವಾಗಿತ್ತು.
ಕೊನೆಕೊನೆಗೆ ಈ ಸ್ಟೇಟ್ಮೆಂಟ್ ನೋಡುವ ಅವನ ಖಯಾಲಿ ಎಲ್ಲಿ ತನಕ ಬಂತೆಂದರೆ, ಯಾರಾದರೂ ಬರುತ್ತಿದ್ದಂತೆ ಅವರ ಚಹರೆ, ಡ್ರೆಸ್ಸು, ಸ್ಟೈಲು ನೋಡಿ ಅವರು ಎಷ್ಟು ದುಡ್ಡಿಟ್ಟಿರಬಹುದೆಂದು ಊಹೆ ಮಾಡುತ್ತಿದ್ದ. ಅವರು ಹೋಗುತ್ತಿದ್ದಂತೆ, ಡಸ್ಟ್‌ಬಿನ್ನಿಂದ ತೆಗೆದ ಸ್ಲಿಪ್ ನೋಡಿ, ತನ್ನ ಊಹೆ ಸರಿಯಿದ್ದರೆ ಮನಸಲ್ಲೇ ಬೀಗುತ್ತಿದ್ದ. ಹೀಗೆ ಬರಬರುತ್ತಾ ರಾತ್ರಿ ಮಲಗಿದರೆ ಸಾಕು, ದುಡ್ಡಿನ ಕಟ್ಟು ಮನೆಯಲ್ಲಿ ಯಾರೋ ತಂದು ಇಟ್ಟನ್ತೆ, ಎ ಟಿ ಎಂ ಕಳುವು ತಾನೇ ಮಾಡಿದಂತೆ, ಯಾರನ್ನೋ ದೋಚಿದಂತೆ ಕನಸು ಬೀಳಲಾರಂಭಿಸಿದವು. ಬೆಳಿಗ್ಗೆ ಹೊತ್ತಲ್ಲಿ ತಾನು ಕೆಟ್ಟ ಯೋಚನೆ ಮಾಡುತ್ತಿರುವುದರಿಂದಲೇ ಈ ರೀತಿ ಕನಸು ಬೀಳುತ್ತಿದೆ ಎಂದೆನಿಸಿ ತನ್ನ ಯೋಚನೆ ಧಾಟಿಯೇ ಅಸಹ್ಯವೆನಿಸಿ, ಈ ದುಡ್ಡಿನ ಪ್ರಪಂಚದಿಂದ ಹೇಗಾದರೂ ಹೊರಬಂದರೆ ಸಾಕೆಂದು ತನ್ನ ಕೆಲಸದ ಜಾಗ ಬದಲಾಯಿಸಿ ಎಂದು ಸೂಪರ್‌ವೈಸರ್ ಬಳಿ ಗೋಗರೆದಿದ್ದ. ಅಂತೂ ಇಂತೂ ಆರು ತಿಂಗಳಾದ ನಂತರ ಸಾಫ್ಟ್‌ವೇರ್ ಕಂಪನಿಗೆ ಸೆಕ್ಯೂರಿಟೀ ಗಾರ್ಡ್ ಆಗಿ ಅವನಿಗೆ ವರ್ಗವಾಗಿತ್ತು.
ಅದಕ್ಕೂ ಮುಂಚೆ ರಮಾಕಾಂತ ಏನು ಮಾಡುತ್ತಿದ್ದ ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಸಿಕ್ಕಾಪಟ್ಟೆ ಕುಡಿಯುತ್ತಿದ್ದ, ಅವನ ಹೆಂಡತಿ ಅವನ ಕುಡಿತ ತಾಳಲಾರದೆ ಕಂಡಕ್ಟರ್ ಒಬ್ಬನ ಜೊತೆ ಓಡಿ ಹೋದಳು ಅನ್ನೋ ಸುದ್ದಿ ಹಬ್ಬಿತ್ತು. ಯಾರಾದರೂ ಅದರ ಬಗ್ಗೆ ಕೇಳಿದರೆ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಆದರೆ ಸಿಟ್ಟನ್ನ ತೋರಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಇವನ ಮಗನೂ ಇವನೆದುರಿಗೆ ಕುಡಿಯಲು ಪ್ರಾರಂಬಿಸಿದ್ದನಂತೆ. ಅದನ್ನು ನೋಡಿ ಅವಮಾನವಾಗಿ ಮಗನಿಗೂ ಬೈದು ತಾನೂ ಕುಡಿತ ಬಿಟ್ಟು ಈ ಕೆಲಸಕ್ಕೆ ಸೇರಿಕೊಂಡಿದ್ದ ಅನ್ನೋ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿತ್ತು. ಹೇಗೆ ಬಿಟ್ಟ, ಯಾಕೆ ಬಿಟ್ಟ ಅನ್ನುವ ಬಗ್ಗೆ ವದಂತಿಗಳಿದ್ದರೂ ಅವನು ಕುಡಿತ ಬಿಟ್ಟಿದ್ದು ಮಾತ್ರ ಅವನ ವಠಾರದವರಿಗೆಲ್ಲ ಆಶ್ಚರ್ಯವಾಗಿತ್ತು. ಇದೆಷ್ಟು ದಿನದ ಆಟವೋ ಇದನ್ನೂ ನೋಡೇಬಿಡೋಣ ಅಂದುಕೊಂಡಿದ್ದರು ಒಂದಿಷ್ಟು ಜನ. ತನ್ನ ಗಂಡನಿಗೂ ಹೀಗೆ ಸಾಕ್ಷಾತ್ಕಾರವಾದಲ್ಲಿ ತನಗೆ ದಿನಾ ಒದೆ ಬೀಳುವುದು ತಪ್ಪಬಹುದು ಅಂತ ಶಾಂತಮ್ಮ ಗಂಡನಿಗೆ ಬೆಳಗೆಲ್ಲಾ ಉಪದೇಶ ಮಾಡುತ್ತಿದ್ದಳು. ಆ ಸಿಟ್ಟಿಗೆ ಅವಳ ಗಂಡ ಮತ್ತೊಂದಿಷ್ಟು ಕುಡಿದು ಬರುತ್ತಿದ್ದ. ಉಪದೇಶ ಕೊಟ್ಟಷ್ಟು ಜಾಸ್ತಿ ಒದೆ ಬೀಳುತ್ತಿತ್ತು.
ಬೆಳಗಿನ ಮೀಟಿಂಗ್ ಮುಗಿಯುತ್ತಿದ್ದಂತೆ ಎಲ್ಲರೂ ಅವರವರ ಕೆಲಸದ ಜಾಗಕ್ಕೆ ಹೊರಡಲಾರಂಬಿಸಿದರು. ಕಂಪನಿಗೆ ಬರುವ ಎಲ್ಲಾ ಕಾರುಗಳ ಕೆಳಗೆ ಕನ್ನಡಿಯಿಟ್ಟು ನೋಡುವುದು, ಡಿಕ್ಕಿ ತೆಗೆದು ಪರೀಕ್ಷಿಸುವುದು, ಪಾರ್ಕಿಂಗ್ ಸ್ಥಳದಲ್ಲಿ ಬೈಕ್, ಕಾರ್ ನಿಲ್ಲಿಸುವವರಿಗೆ ವಿಶಲ್ ಹೊಡೆಯುತ್ತಾ ದಾರಿ ತೋರಿಸುವುದು, ಪ್ರಾಜೆಕ್ಟ್ ನಡೆಯುವ ಮಹಡಿಗಳಲ್ಲಿ ಬಾಗಿಲು ಕಾಯುವುದು ಹೀಗೆ ಒಂದಿಲ್ಲೊಂದು ಕೆಲಸವಹಿಸಲಾಗುತ್ತಿತ್ತು. ಆದರೆ ಅವನಿಗಿಷ್ಟವಾದ ಕೆಲಸವೆಂದರೆ ರಿಸೆಪ್ಷನ್ ಡೆಸ್ಕ್ ನ ಬಳಿ ನಿಂತು ಕೆಲಸಕ್ಕೆ ಬರುವ ಎಲ್ಲರ ಐ ಡಿ ಕಾರ್ಡ್ ಮತ್ತು ಬಾಗ್ ಚೆಕ್ ಮಾಡುವುದು. ಕಾರು ಬೈಕುಗಳಲ್ಲದೇ ಮನುಷ್ಯರು ಅಂತ ಓಡಾಡುವ ಜಾಗ ಅದೊಂದೇ. ಅದಕ್ಕೂ ಮುಖ್ಯವಾದ ಕಾರಣ ಇನ್ನೊಂದಿತ್ತು. ಮೊಣಕಾಲು ತನಕ ಮಾತ್ರ ಮುಚ್ಚುತ್ತಿದ್ದ ಕಪ್ಪು ಸ್ಕರ್ಟ್ ಮೇಲೊಂದು ಬಿಳಿ ಷರ್ಟು ಕಪ್ಪು ಬ್ಲೇಸರ್ ಹಾಕಿ ತಲೆಗೂದಲನ್ನ ಮಟ್ಟಸವಾಗಿ ಬಾಚಿ ರಿಸೆಪ್ಶನ್ ಡೆಸ್ಕ್ನಲ್ಲಿ ಕೂತಿರುತ್ತಿದ್ದ ಮೇರಿ. ಅವಳ ನಸುಗೆಂಪು ಬಣ್ಣ ಅವನನ್ನ ಆಕರ್ಷಿಸುತ್ತಿತ್ತು. ಹಣೆಯ ಮೇಲಿನ ದೊಡ್ಡ ಮಚ್ಚೆಯನ್ನ ತನ್ನ ಕೂದಲಿಂದ ಮುಚ್ಚಿರುತ್ತಿದ್ದಳು. ಅದು ಮಚ್ಚೆಯೋ ಅಥವಾ ಹಾಗೆ ಅಗಲ ಬಿಂದಿ ಹೊಸ ಸ್ಟೈಲೋ ಎಂಬುದು ತಿಳಿಯದೆ ಹತ್ತಿರದಿಂದ ನೋಡಿ ತೀರ್ಮಾನಕ್ಕೆ ಬರಬೇಕೆಂದು ಅವಕಾಶಕ್ಕೆ ಕಾಯುತ್ತಿರುತ್ತಿದ್ದ. ಅವಳು ಬರುವಾಗ ಹೋಗುವಾಗ ಅವಳ ಕಾಲನ್ನೇ ನೋಡುವುದರಲ್ಲಿ ನಿರತನಾಗುತ್ತಿದ್ದ. ಅವಳನ್ನೊಮ್ಮೆ ಹೇಗಾದರೂ ಮಾತಾಡಿಸಬೇಕೆಂದು ದಾರಿ ಹುಡುಕುತ್ತಿರುತ್ತಿದ್ದವನಿಗೆ ಅವತ್ತು ಐ ಡಿ ಕಾರ್ಡ್ ಮರೆತು ಬಂದ ಎಂಪ್ಲಾಯಿ ಒಬ್ಬನನ್ನ ಇವಳೆದುರಿಗೆ ಕರೆದುಕೊಂಡು ಬರುವುದು ನೆಪವಾಗಿತ್ತು. ಅವಳನ್ನ ನೋಡಿ ಸುಮ್ಮನೇ ಹಲ್ಲು ಕಿರಿದ. ಎಂಪ್ಲಾಯಿ ಬಳಿ ನಗುತ್ತಾ ಹೆಸರು, ಪ್ರಾಜೆಕ್ಟ್ ಕೇಳಿದ ಅವಳು ಎಂದಿನಂತೆ ರಮಾಕಾಂತನನ್ನೊಮ್ಮೆ ದುರುಗುಟ್ಟಿ ನೋಡಿದಳು. ಇವಳ ಅಂದಕ್ಕೂ ದುರುಗುಟ್ಟುವ ನೋಟಕ್ಕೂ ಸಂಬಂದವೇ ಇಲ್ಲವೆಂದು ಬೈದು ತನ್ನ ಕೆಲಸ ಮುಂದುವರೆಸಿದ.
ಎ ಟಿ ಎಂ ಕೆಲಸ
ಬಿಟ್ಟಾಗಿನಿಂದ ರಮಾಕಾಂತನಿಗೆ ನೆಮ್ಮದಿ ಎನಿಸುತಿತ್ತು. ಸಮಯ ಮೊದಲಿನಷ್ಟು ದಂಡಿಯಾಗಿ ಬಿದ್ದಿರುತ್ತಿರಲಿಲ್ಲ. ಪರಿಣಾಮವಾಗಿ ಕೆಟ್ಟ
ಆಲೋಚನೆಗಳು ಮೂಡುತ್ತಿರಲಿಲ್ಲ. ದುಡ್ಡಿನ ಭ್ರಮೆ ತೊಲಗಿ ಭಯಾನಕ ಕನಸುಗಳು ಬೀಳುವುದು ನಿಂತು ಹೋಗಿತ್ತು. ಆದರೆ ಇತ್ತೀಚಿಗೆ ಅವನಿಗೆ ಹಗಲುಗನಸೊಂದು
ಶುರು ಆಗಿತ್ತು. ಆಫೀಸ್ ಗೆ ಬರುವ ಹೋಗುವವರನ್ನ ನೋಡುತ್ತಾ ತನ್ನ ಮಗನಿಗೂ ಇಲ್ಲೇ ಕೆಲಸ ಸಿಕ್ಕರೆ ಹೇಗಿರುತ್ತೆಂದು
ಆಲೋಚಿಸತೊಡಗಿದ್ದ. ಈ ವರ್ಷ ಹೇಗಿದ್ದರೂ ಅವನ ಡಿಗ್ರಿ ಮುಗಿಯುತ್ತದೆ, ಯಾರನ್ನಾದರೂ ಪರಿಚಯ ಮಾಡಿಕೊಂಡು
ಅವನಿಗೊಂದು ಕೆಲಸ ಕೊಡಿಸಬೇಕೆಂದು ಅನ್ನಿಸುತ್ತಿದ್ದಾದರೂ ಯಾರನ್ನು ಕೇಳುವುದು ಎಂದು ತೋಚದೆ ಸುಮ್ಮನಾಗುತ್ತಿದ್ದ.
ಮಗ ಇಲ್ಲಿ ಶೂ ಟೈ ಹಾಕಿಕೊಂಡು ಓಡಾಡಿದಂತೆಯೂ, ಒಳಗಿನ ಚಂದದ ಕ್ಯೂಬಿಕಲ್ ನಲ್ಲಿ ಕಂಪ್ಯೂಟರ್ ಮುಂದೆ
ಕುಳಿತುಕೊಂಡಂತೆಯೂ, ಕ್ಯಾಂಟೀನ್ನಲ್ಲಿ ಚಂದದ ಹುಡುಗಿಯರ ಜೊತೆ ಹರಟೆ ಹೊಡೆಯುತ್ತಾ ಪಿಜ್ಜಾ ತರಿಸಿಕೊಂಡು ತಿಂದಂತೆಯೂ, ತಾನು ಈ ಕೆಲಸ ಬಿಟ್ಟು ಸುಖವಾಗಿ ಮನೆಯಲ್ಲಿ ಕೂತು ನಿವೃತ್ತಿ ಜೀವನ ಸಾಗಿಸಿದಂತೆಯೂ ಭಾಸವಾಗುತ್ತಿತ್ತು. ಅವನಿಗೆ ಕೆಲಸ ಸಿಗಬೇಕೆಂದು ತಾನು ಬಯಸುತ್ತಿರುವುದು ತನ್ನ ಸ್ವಾರ್ಥವೋ ಅಥವಾ ಮಗನ ಪ್ರೀತಿಗೋ .. ಕೇಳಿಕೊಂಡ ಪ್ರಶ್ನೆಗೆ ಉತ್ತರ ಸಿಗಲಿಲ್ಲ.
ಮಧ್ಯಾಹ್ನ ಆಗುತ್ತಿದ್ದಂತೆ
ಒಂದೇ ಸಮನೆ ಮಾಡಿದ್ದೇ ಕೆಲಸ ಮಾಡಿ ಮಾಡಿ ಬೋರಾಗಲಾರಂಭಿಸಿತ್ತು. ಕಂಪನಿಗೆ ಬರುವವರ, ಹೋಗುವವರ ಸಂಖ್ಯೆಯೂ
ಕಡಿಮೆಯಾಗಿತ್ತು. ಕೆಲಸದ ವೇಳೆಯಲ್ಲಿ ಕೆಲಸವಿಲ್ಲದಿದ್ದರೂ ಕೂರುವ ಹಾಗಿಲ್ಲ. ಅಲ್ಲೇ ಅತ್ತಿಂದಿತ್ತ
ಸುತ್ತಾಡುತ್ತಾ ತಾನು ಇನ್ನೆಷ್ಟು ವರ್ಷ ಹೀಗೆ ಹುಚ್ಚು ಕೆಲಸ ಮಾಡುತ್ತಿರಬೇಕೋ ಅಂತ ತನಗೆ ತಾನೇ ಕೇಳಿಕೊಂಡ. ಊಟ ಮಾಡಿ ಆಗ ತಾನೇ ಬಂದು ಕೂತ ಮೇರಿಯನ್ನ ಇವತ್ತು ಹೇಗಾದರೂ ಮಾಡಿ ಮಾತಾಡಿಸಬೇಕೆಂದು ನಿರ್ಧರಿಸಿದ. ಅವಳೊಬ್ಬಳೇ ರಿಸೆಪ್ಶನ್ ಡೆಸ್ಕ್ ಬಳಿ ಇರುವುದನ್ನ ನೋಡಿ
ಧೈರ್ಯ ಮಾಡಿ ಅವಳಲ್ಲಿಗೆ ಹೋದ. ತನ್ನ ಮಗನ ಕೆಲಸದ ಬಗ್ಗೆಯೂ ಕೇಳಿದಂತೆ ಆಯಿತು, ಇತ್ತ ಅವಳೊಡನೆ ಮಾತಾಡಿದಂತೆಯೂ ಆಯಿತು ಅನ್ನುವುದು ಇವನ ಲೆಕ್ಕಾಚಾರ. 'ಊಟ ಆಯ್ತಾ ಮೇಡಂ ... ಈ ಕಂಪನೀಲಿ ಕೆಲ್ಸ ಮಾಡಕ್ಕೆ ಏನು ಓದಿರ್ಬೇಕು ಮೇಡಂ' ಅಂತ ಒಂದೇ
ಉಸಿರಲ್ಲಿ, ಅವಳು ದುರುಗುಟ್ಟಿ ನೋಡುವುದಕ್ಕೆ ಮುಂಚೆಯೇ ಕೇಳಿ ಮುಗಿಸಿದ. "ಸೆಕ್ಯೂರಿಟೀ ಕೆಲಸ
ಮಾಡೋಕೆ ಓದೋಕೆ ಬರಿಯೋಕೆ ಅಷ್ಟು ಬಂದರೆ ಸಾಕು" ಉಡಾಫೆಯಿಂದ ಉತ್ತರಿಸಿ ನಕ್ಕಳು. ಇಷ್ಟು ಹತ್ತಿರದಿಂದ ಅವಳ ನಗುವನ್ನ ಮೊದಲ ಬಾರಿಗೆ ನೋಡಿದ್ದ. ತನ್ನೆದುರಿಗೇ
ನಕ್ಕಾಗ ಇನ್ನೂ ಚಂದ ಕಂಡಳಾದರೂ ಮರುಕ್ಷಣ ಅವಮಾನವಾಯಿತೆಂದೆನಿಸಿ ಅವಳ ಮುಖ ಮತ್ತೆ ನೋಡಲಾಗದೇ ವಾಪಸು
ಬಂದಿದ್ದ. ಹಣೆಯ ಮೇಲಿನದು ಮಚ್ಚೆಯೋ ಅಥವಾ ಬಿಂದಿಯೋ ಅವನ ಅನುಮಾನ ಹಾಗೆಯೇ ಉಳಿಯಿತು.
ಅವತ್ತು ಎಂದಿಗಿಂತ ಬೇಗ ಮನೆಗೆ ಬಂದಿದ್ದ ರಮಾಕಾಂತ ಗೌಡ. ಗಡಿಬಿಡಿಯಲ್ಲಿ ಬಂದವನೇ ಮನೆ ತಲುಪುವ ಮೊದಲೇ 'ರಮೇಶ.. ರಮೇಶ...' ಅಂತ ಕೂಗುತ್ತಾ ಮನೆ ಬಾಗಿಲು ಇನ್ನೂ ಹಾಕಿರುವುದನ್ನ ನೋಡಿ ಮಗ ಬರುವ ಸಮಯ ಇನ್ನೂ ಆಗಿಲ್ಲವೆಂದು ನೆನೆದು ತನ್ನ ಬಳಿ ಇದ್ದ ಮತ್ತೊಂದು ಕೀ ಇಂದ ಮನೆ ಬೀಗ ತೆರೆದ. ಮೇರಿಯ ಮಾತು ಅವನನ್ನು ಚುಚ್ಚುತ್ತಿತ್ತು. ಮಗನ ಮಾರ್ಕ್ಸ್ ಕಾರ್ಡ್ ತೆಗೆದು ಅವಳ ಮುಂದಿಟ್ಟು ಇಷ್ಟು ಓದಿದ್ರೆ ಸಾಕಾ ಅಂತ ಕೇಳಿ ತಿರುಗೇಟು ಕೊಡಬೇಕು ಎಂದು ತೀರ್ಮಾನ ಮಾಡಿದ್ದ. ಒಳಕೋಣೆ ಹೊಕ್ಕು ಮೇಲಿದ್ದ ಮಗನ ಟ್ರಂಕನ್ನ ತೆಗೆದು ಕೆಳಗಿಟ್ಟ. ಟ್ರಂಕಿನ ಒಳಗಿದ್ದ ಹಸಿರು ರಟ್ಟಿನ ಫೈಲ್ ತೆರೆದವನಿಗೆ ಅದರಲ್ಲಿ P U C ಯ ಎರಡು ಮಾರ್ಕ್ಸ್ ಕಾರ್ಡ್ ಸಿಕ್ಕವು. ಎರಡರಲ್ಲೂ ಇವನದೇ ಹೆಸರು. ಮೊದಲೊಮ್ಮೆ ಫೇಲ್ ಆಗಿದ್ದು ಮರೆಮಾಚಿದನಾ. ಪಾಸಾಗಿದ್ದೆನೆಂದು ಸುಳ್ಳು ಬೊಗಳಿದನಾ. ಅವನು ಬರುತ್ತಿದಂತೆ ಎರಡು ಎರಡು ಬಾರಿಸಿ ಕೇಳಬೇಕು ಎಂದು ನಿರ್ಧರಿಸಿದ. ಮತ್ತೆ ಟ್ರಂಕಿನ ತುಂಬಾ ತಡಕಾಡಿದ. ಡಿಗ್ರಿ ಮೊದಲ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್ ಬಟ್ಟೆಗಳ ಮಧ್ಯೆ ಅನಾಥವಾಗಿ ಬಿದ್ದುಕೊಂಡಿತ್ತು. ದಪ್ಪ ಅಕ್ಷರಗಳಲ್ಲಿ FAIL ಎಂದು ಬರೆದಿತ್ತು. ವಿಷಯ ನೋಡುತ್ತಾ ಬಂದ. ಕನ್ನಡ ಒಂದು ಬಿಟ್ಟರೆ ಮತ್ತೆಲ್ಲಾ ಫೇಲ್. ಉಳಿದ ಸೆಮಿಸ್ಟರ್ ನ ಯಾವ ಮಾರ್ಕ್ಸ್ ಕಾರ್ಡ್ ಕೂಡ ಅಲ್ಲಿರಲಿಲ್ಲ. ಇಷ್ಟು ದಿನ ತನಗೆ ಮೋಸ ಮಾಡಿದ ಬೋಸುಡಿ ಮಗ ಎಂದುಕೊಂಡ ಅವನ ಕೋಪ ತಾರಕಕ್ಕೇರಿತ್ತು.
ಮತ್ತೆ ಟ್ರಂಕ್ ತಡಕಾಡಿದ ಅವನಿಗೆ ಟ್ರಂಕಿನ ತಳದಲ್ಲಿ ಹಾಸಿದ ಪೇಪರ್ ನ ಕೆಳಗೆ ಕಂಡಿದ್ದು, ಅವನ ಹೆಂಡತಿಯ ಫೋಟೋ. ಅವಳು ಓಡಿ ಹೋಗಿ ಇನ್ನೊಂದು ತಿಂಗಳಿಗೆ ೧೦ ವರ್ಷ. ಅವಳ ಮುಖವೇ ಮರೆತು ಹೋಗಿತ್ತು. ಅವಳು ಬಿಟ್ಟು ಹೋದ ದಿನದಿಂದ ಅವಳ ಫೋಟೋ ನೋಡುವುದಿರಲಿ ಅವಳ ಬಗ್ಗೆ ಒಂದೇ ಒಂದು ಮಾತನ್ನಾಡಿರಲಿಲ್ಲ. ಅವಳ ಕಂಡಕ್ಟರ್ ಮೇಲಿನ ಪ್ರೀತಿಗಾಗಿ ಅವನ ಕುಡಿತದ ಕಾರಣ ಹೇಳಿ ಬಿಟ್ಟು ಹೋದ ಅವಳು ಹೋಗುವ ಮುಂಚೆ ವಠಾರದಲ್ಲಿ, ನೆಂಟರಲ್ಲಿ ಎಲ್ಲರಿಗೂ ಇವನ ಬಗ್ಗೆ ಸಾಕಷ್ಟು ಹೇಳಿ ಇನ್ನಿವನ ಜೊತೆ ಇರಲಾರೆ ಎಂದು ಹೋದವಳು, ಬಿಟ್ಟು ಹೋದ ಒಂದೇ ತಿಂಗಳಿಗೆ ಆ ಕಂಡಕ್ಟರ್ ಜೊತೆ ಮದುವೆಯಾಗಿದ್ದಳು. ಮಗ ಅವಾಗ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದ. ಮನೆಗೆ ಬಂದವನೇ ಅಮ್ಮ ಎಲ್ಲಿ ಕಾಣ್ತಿಲ್ಲ, ಅಂತ ಕೇಳಿದರೆ ಅವನು ಉತ್ತರಿಸಿರಲಿಲ್ಲ. ಪಕ್ಕದ ಮನೆಯ ಶಾಂತಮ್ಮ ಅವನಿಗೆ ವಿವರಿಸಿದ್ದಳು. "ನಿಮ್ಮಮ್ಮ ಒಡೊಗಯ್ತೆ ಕಣೋ .. ನಿನ್ನ ಅಪ್ಪನ್ನ ಜೊತೆ ಏಗಕ್ಕಾಗಲ್ವನ್ತೆ ಅವಳಿಗೆ... ". ಅವತ್ತಿಂದ ರಮಾಕಾಂತನ ಕುಡಿತ ಇನ್ನೂ ಹೆಚ್ಚಿತ್ತು. ಮಗನಿಗೆ ಅಡಿಗೆ ಮಾಡಿಟ್ಟು ಕುಡಿಯಲು ಹೋದರೆ ಮನೆಗೆ ಬರುವಾಗ ಮದ್ಯರಾತ್ರಿ. ರಮೇಶ ಮನೆಯಲ್ಲಿ ಮಾತನ್ನೇ ಆಡದೆ ಎಷ್ಟೋ ವರ್ಷಗಳಾಗಿತ್ತು. ಅಪ್ಪ ಮಾಡಿದ ಅಡಿಗೆ ಸೇರುತ್ತಿರಲಿಲ್ಲ. ಅಮ್ಮನ ಹಾಡಿರುತ್ತಿರಲಿಲ್ಲ. ಜಗಳ ಮಾಡಲೂ ಜೊತೆಯಿರಲಿಲ್ಲ. ಕಾಲೇಜಿಗೆ ಸೇರಿದ ಮೇಲೆ ಮನೆಗೆ ಲೇಟಾಗಿ ಬರಲು ಶುರು ಮಾಡಿದ. ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದರೆ ಮನೆಗೆ ಬರಬೇಕೆಂದಿನಿಸುತ್ತಿರಲಿಲ್ಲ. ಹೀಗೆ ಗೆಳೆಯರ ಜೊತೆ ಕೂತು ಕುಡಿಯುವುದು ಕೂಡ ಅಭ್ಯಾಸವಾಯಿತು. ಒಂದಿನ ಕುಡಿದ ಮೇಲೆ ಉಳಿದದ್ದೊಂದಷ್ಟನ್ನ ನಶೆಯಲ್ಲಿ ಮನೆಗೆ ತಂದು ಕುಡಿಯಲಾರಂಭಿಸಿದ್ದ. ರಮಾಕಾಂತನಿಗೆ ಅದೇನೆನ್ನಿಸಿತೋ ಏನೋ ಅವತ್ತಿಂದ ಕುಡಿತ ಬಿಟ್ಟವನು ಕೆಲಸಕ್ಕಾಗಿ ಅಲೆಯಲು ಶುರು ಮಾಡಿದ್ದ. ಹೆಂಡತಿಯ ಫೋಟೋ ನೋಡುತ್ತಿದಂತೆ ಎಲ್ಲವೂ ಒಮ್ಮೆಲೇ ಕಣ್ಣ ಮುಂದೆ ಸುಳಿದು ಹೋಯಿತು. ಎಲ್ಲಾ ಸರಿ ಇದ್ದಿದ್ದರೆ ಮಗನೂ ಸರಿ ಇರುತ್ತಿದ್ದ ಅನಿಸಲು ಆರಂಭವಾಯಿತು. ಹೆಂಡತಿಯ ಮೇಲಿನ ಕೋಪ ಹೆಚ್ಚಾಗುತ್ತಿದ್ದಂತೆ ಮಗನ ಮೇಲೆ ಕನಿಕರ ಹೆಚ್ಚಾಗಿ ಅವನ ಮೇಲಿನ ಕೋಪ ಶಾಂತವಾಯಿತು. ಮಗ ಮನೆಗೆ ಬಂದವನೇ ಅವನಿಗೆ ಕೇಳಿದ "ಕಾಲೇಜ್ ಗೆ ಹೋಗೋದು ನಿಲ್ಸಿದಿಯಾ... " ಎರಡು ವರ್ಷ ಆಯಿತು ಅಂತ ಗಟ್ಟಿ ದನಿಯಲ್ಲಿ ಆ ಕಡೆಯಿಂದ ಬಂದ ಉತ್ತರಕ್ಕೆ ಮತ್ತೆ ಪ್ರಶ್ನೆ ಹಾಕುವ ಮನಸ್ಸು ಬರಲಿಲ್ಲ ಅಥವಾ ಧೈರ್ಯ ಸಾಲಲಿಲ್ಲ.
"ಎದ್ದವನೇ ITPL ಬಸ್ ಹತ್ತಿ ನಾನು ಕೆಲಸ ಮಾಡೋ ಜಾಗಕ್ಕೆ ಬಾ.. ಅಡ್ರೆಸ್ ದಿಂಬಿನ ಕೆಳಗೆ ಇಟ್ಟಿದಿನಿ.." ಎಂದು ರಮೇಶನಿಗೆ ಹೇಳಿ ಮತ್ತದೇ ಶರ್ಟು, ಪ್ಯಾಂಟು, ಸಾಕ್ಸ್ ಮತ್ತೊಂದು ದಿನಕ್ಕೆ ವಿಸ್ತರಿಸಿ ಕಂಪನಿ ಒಳ ಸೇರಿದ. ಸುಮಾರು ಹತ್ತು ಗಂಟೆಯ ಹೊತ್ತಿಗೆ ರಮೇಶ ಅಲ್ಲಿಗೆ ಬಂದ. ಅವನನ್ನ ಸೂಪರ್ವೈಸರ್ ಬಳಿ ಕರೆದುಕೊಂಡು ಹೋಗಿ "ಇವನು ನನ್ನ ಮಗ... PUC ಓದಿದಾನೆ... ಇಲ್ಲೇ ಒಂದು ಕೆಲಸ ಕೊಡ್ಸಿ" ಅಂಗಲಾಚಿದ. ಮಾರನೆಯ ದಿನದಿಂದಲೇ ಕೆಲಸಕ್ಕೆ ಸೇರಿಕೊಳ್ಳಲಿ ಅಂದಿದ್ದ ಸೂಪರ್ವೈಸರ್.
ಮಾರನೆಯ ದಿನ ರಿಸೆಪ್ಶನ್ ಡೆಸ್ಕ್ ಬಳಿ ಹೋಗಿ ಮಗನಿಗೆ ಟೆಂಪರರಿ I D ಕಾರ್ಡ್ ಮಾಡಿಸಲು ಮೇರಿಯ ಮುಂದೆ ಬಂದು ನಿಂತ. ಮೊನ್ನೆ ತಾನು ನಕ್ಕಿದ್ದು ರಮಾಕಾಂತನಿಗೆ ಬೇಜಾರಾಯಿತೆಂದು ತಿಳಿದು ತಪ್ಪು ಭಾವಿಸದಿರಲಿ ಎಂದು ಮೊದಲ ಬಾರಿಗೆ "ಏನ್ರಿ ರಮಾಕಾಂತ್... ಆಯ್ತಾ ತಿಂಡಿ... ಇವನು ನಿಮ್ಮ ಮಗನಾ... ನಿಮಗೆ ಇಷ್ಟು ದೊಡ್ಡ ಮಗ ಇದಾನೆ ಅಂತ ಗೊತ್ತೇ ಆಗಲ್ಲ ನೋಡಿ.. " ಅವನನ್ನ ಮಾತಾಡಿಸಿದ್ದಳು. ಮಾತಾಡುವ ಉತ್ಸಾಹ ಇವನಿಗಿರಲಿಲ್ಲ. ಹ್ಮ್ ಎಂದಷ್ಟೇ ಹೇಳಿ ಸುಮ್ಮನಾದ. ಅವಳ ನಗು ಮತ್ತೆ ಇವನನ್ನ ಅಣಕಿಸಿದಂತಾಯಿತು. ಮತ್ತೆ ಮುಖ ಎತ್ತಿ ಅವಳನ್ನ ನೋಡುವ ಉತ್ಸಾಹವಿರಲಿಲ್ಲ. ಮಚ್ಚೆಯೋ ಬಿಂದಿಯೋ ಕುತೂಹಲ ಅಲ್ಲಿಗೇ ಮುಗಿದು ಹೋಗಿತ್ತು. ಮಗನಿಗೆ ರಿಸೆಪ್ಶನ್ ಡೆಸ್ಕ್ ಬಳಿ ಐ ಡಿ ಕಾರ್ಡ್, ಬಾಗ್ ಪರೀಕ್ಷಿಸುವ ಕೆಲಸ ವಿವರಿಸಿದ. ಮಗನ ಹೊಸ ಯುನಿಫಾರ್ಮ್ ನ ನೀಲಿ ನಕ್ಷತ್ರದ ಚಿಹ್ನೆ ನೋಡಿ ಕಣ್ಣಿಗೆ ಮಂಪರು ಹತ್ತಿದಂತಾಯಿತು. ಎಲ್ಲೋ ಇದ್ದ ಮೋಡವೊಂದು ತೇಲಿ ಬಂದು ಆಕಾಶದಲ್ಲಿ ನಕ್ಷತ್ರ ಕರಗಿ ಹೋಗುವಂತೆ ನೀಲಿ ನಕ್ಷತ್ರದ ಚಿಹ್ನೆ ಮಸುಕು ಮಸುಕಾಯಿತು. ತಕ್ಷಣ ಅಲ್ಲಿಂದ ಹೊರಟು ಬೇಸ್ಮೆಂಟ್ ಗೆ ತೆರಳಿ ಮತ್ತೊಂದು ಹೊಸ ಕನಸೊಂದಕ್ಕೆ ತೆರೆದುಕೊಳ್ಳಲು ಕಾಯುತ್ತಾ ಕೂತ.

ನಿಜ..., ಮಗ ಓದಿ ವಿದ್ಯಾವಂತನಾಗುತ್ತಾನೆ ಎಂದು ಕನಸು ಕಾಣುತ್ತಿರುವ ಹಾಗೂ ಅದು ಕನಸಾಗಿಯೇ ಉಳಿಯುವ ಎಷ್ಟೋ ಅಪ್ಪಂದಿರಿದ್ದಾರೆ . ಕಥೆ , ನಿರೂಪಣೆ ಎರಡೂ ಸೊಗಸಾಗಿದೆ .
ಪ್ರತ್ಯುತ್ತರಅಳಿಸಿThanks a lot for reading it with patience and liking it :)
ಅಳಿಸಿsuper.....
ಪ್ರತ್ಯುತ್ತರಅಳಿಸಿthanks maga odiddakke.. saw your comment today :)
ಅಳಿಸಿChennagide
ಪ್ರತ್ಯುತ್ತರಅಳಿಸಿ