ಹರವಿಕೊಂಡು ಕೂತಿದ್ದೆ ನೂರಾರು ಕನಸು
ನಿನ್ನ ನೋಡುವ ಮೊದಲು..
ಆಮೇಲೆಲ್ಲಾ ನಿನ್ನದೊಂದೇ ಕನಸು
ಉಳಿದವೆಲ್ಲಾ, ಬರಿ ಕಾಗದದಲ್ಲೇ
ಉಳಿದು ಹೋದ ಸಾಲು...
ಶಹರದ ಕೋಟೆಯ ಮೇಲೆ ಹತ್ತಿ
ರಾಜನಂತೆ ಮೆರೆಸಿ ರಾಣಿಯಂತೆ ಮೆರೆದಾ ಕೆ..
ಕೋಟೆಯ ತುದಿಯಲ್ಲಿ ನಿಂತು
ನಗಾರಿ ಬಾರಿಸುವುದೊಂದೇ ಬಾಕಿ
ಹೊಸ ಮನ್ವಂತರದ ಆರಂಭಕೆ...
ಇದ್ದಕ್ಕಿದ್ದಂತೆ ಕೊನೆಯಾಯಿತು
ಜೊತೆ ನಡೆದ ಹಾದಿ...
ಅವನೇ ಎಳೆದೊಯ್ದನೋ, ನೀನೇ
ತಲೆಯಾಡಿಸಿ ಹಿಂದೆ ಹೊದೆಯೋ
ಎಲ್ಲಾ ಅಸ್ಪಷ್ಟ ಚಿತ್ರ..
ಕಡಲ ಕಿನಾರೆಯಲಿ ಹುಚ್ಚು ಮಳೆ
ನನ್ನೆದೆಯಲ್ಲಿ ಭೋರ್ಗರೆತ...
ನಿನ್ನಪ್ಪ, ಅಲೆಗಳಷ್ಟೇ ನಿರ್ದಯಿ
ಕಾರಣ ಬೇಕಿಲ್ಲ, ನನ್ನಿಂದ ನೀ
ದೂರಾದದ್ದೊಂದೇ ವಿಧಿತ...
ಕೋಟೆಯ ಶಿಥಿಲ ಗೋಡೆಗಳಿನ್ನೂ
ಕಥೆ ಹೇಳುತ್ತಿವೆ.. ಕೇಳುವವರ್ಯಾರಿ ಲ್ಲ..
ಇನ್ನೇನಿದ್ದರೂ
ನಿನ್ನದು ನೆನಪು ಮಾತ್ರ
ಮತ್ತೆ ಸಿಗುವೆಯೆಂಬ ಕನಸಿಲ್ಲ..
ಆದರೆ ಖುಷಿಯ ವಿಚಾರ ಕೇಳು...
ಮತ್ತೆ ಮರುಜನ್ಮ ತಳೆದಿದೆ ನೂರಾರು ಕನಸು....
ಎಲ್ಲಕ್ಕೂ ಸ್ಪೂರ್ತಿ ನೀನೆ... ನಿನ್ನ ಮೇಲಿನ
ಹಠ... ಮುನಿಸು...
-
ಅಕ್ಷಯ ಪಂಡಿತ್, ಸಾಗರ