September 14, 2012

Software Engineer ನ ಖಾಸ್‌ಬಾತ್
ವಾರದ ೫  ದಿನ ನಿರಂತರ ಜೀತ !
ಸೋಮವಾರ ಬೆಳಗಾದರೆ ಸಾಕು,
ಶುಕ್ರವಾರ ಸಂಜೆ ಯಾವಾಗಾಗುವುದೋ
ಅನ್ನೋ ಚಿಂತೆ.. 
ದಿನಕ್ಕೆ ಹತ್ತು ಗಂಟೆ office ನಲ್ಲಿ..
ಆಮೇಲೆ office ಏ ಬರುತ್ತೆ ಮನೆಗೆ
laptop ರೂಪದಲ್ಲಿ.. 
ಕಿನ್ನರಿ ವೇಷ ಧರಿಸಿ ಬರುವ ಮಾಯಾವಿ
ರಕ್ಕಸನಂತೆ!

ಅಮ್ಮ ಹೇಳ್ತಾ ಇರ್ತಾಳೆ
ಈಗಿನ ಕಾಲದ ಹುಡುಗರಿಗೆ ಜನ ಬಳಕೆ ಕಡಿಮೆ... 
ನನ್ನದೇನಿದೆ ತಪ್ಪು..  
ಬಳಕೆಯಲ್ಲಿರುವುದೇ ಅಷ್ಟು ಜನ... 
ಸೈಟು, ಅಪಾರ್ಟ್‌ಮೆಂಟು, ಕಾರು
ಬೇರೆ ಏನೂ ಬೇಕಿಲ್ಲ... 
ಅವರಿಗೆ ಅವರದ್ದೇ ಒಂದು ಲೋಕ
client ಕೆಲಸವೇ ಕೈಲಾಸ...

ಅಮೇರಿಕ ದಲ್ಲಿರುವ ಕ್ಲೈಂಟ್ ಗೆ ಬೆಳಕು ಹರಿದರೆ
ನಮಗದು ಸುಪ್ರಭಾತ.. 
ಮುಖವನ್ನೇ ನೋಡದೇ ಇಷ್ಟು ದಿನ 
ಅವನೊಡನೆ ಮಾತುಕತೆ...
ಕಡೆಯ ತನಕ ಮುಖ ತೋರಿಸದೇ 
ಮರೆಯಲ್ಲಿ ನಿಂತು ಮಾತನಾಡುವ ಹಳೆ ಕಾಲದ
ಪಿಕ್ಚರ್ನ ಕೇಡಿಯೊಬ್ಬ ನೆನಪಾಗುತ್ತಾನೆ!
ಪಿಕ್ಚರ್ ನ  climax ನಲ್ಲಿ ಆಗುವಂತೆ 
ಯಾರಾದರೂ ಬಂದು ಅವನನ್ನ 
ಚಚ್ಚಿ ಹಾಕಬಾರದೇ  ಎಂದುಕೊಳ್ಳುತ್ತೇನೆ!

ಎಲ್ಲಾ ಮುಗಿಸಿ ಮಲಗೋಣವೆನ್ನುವಷ್ಟರಲ್ಲಿ
ಬಾಸ್ ನ ಫೋನ್ "ಸ್ಟೇಟಸ್ ಏನಾಯ್ತು?"
ಬೆಳಿಗ್ಗೆ ಯಾರದೋ facebook status ನೋಡಿದ ನೆನಪು
"ಕನ್ನಡಿಗ ನೀನು ಗರ್ವದಿಂದ ಘರ್ಜಿಸು!"
ದಿನಾ ರಾತ್ರಿ ಕೇಳುವುದು ಮಾತ್ರ ತಮಿಳು ಬಾಸಿನ ಘರ್ಜನೆ !

ಹಾಗೋ ಹೀಗೋ ಶುಕ್ರವಾರ ಅಂತ್ಯವಾದರೆ
weekend ಮಾಡಬೇಕಿರುವ ಕೆಲಸಗಳದೊಂದು 
ಬೃಹತ್ ಪಟ್ಟಿ...

ಮತ್ತೆ ಸೋಮವಾರ ಬೆಳಿಗ್ಗೆ...
ಹೊಸ ತೆಲುಗು ಪಿಕ್ಚರ್ ನೋಡಿ ಬಂದವನ
ಮುಖದಲ್ಲಿ ಏನೋ ಸಾಧಿಸಿದ ಖುಷಿ.. 
ಕೇಳುತ್ತಾನೆ. "how was your weekend man"

ಏನು ಮಾಡಿದೆನೋ, ಬಿಟ್ಟೆನೋ ಗೊತ್ತಿಲ್ಲ... 
ಒಟ್ಟಿನಲ್ಲಿ,  ಹೊಸ ವಾರದ ಜೀತಕ್ಕೆ 
fresh ಆಗಿ ready!!


-
ಅಕ್ಷಯ ಪಂಡಿತ್ಸಾಗರ


12 comments:

 1. ಇದನ್ನು ಬರೆದು ಎಲ್ಲರಿಗೂ ಮೈಲ್ ಮಾಡಿದಾಗ ಬಂದ ಪ್ರತಿಕ್ರಿಯೆಗಳು ಸ್ಪೂರ್ತಿ ತುಂಬಿವೆ. ಪ್ರೋತ್ಸಾಹ ಕೊಟ್ಟಿವೆ.
  ಮೈಲ್ ನಲ್ಲೇ ಇಟ್ಟು ಇದನ್ನೆಲ್ಲ ಮರೆಯುವ ಬದಲು ಹೊಸತಾಗಿ ಶುರು ಮಾಡಿದ ಈ ಬ್ಲಾಗ್ ನಲ್ಲಿ ಕಾಮೆಂಟ್ ರೂಪದಲ್ಲಿ ಪೋಸ್ಟ್ ಮಾಡಿದ್ದೇನೆ.
  ಓದಿದ, ಇಷ್ಟಪಟ್ಟ, ಸಲಹೆ ಕೊಟ್ಟ ಎಲ್ಲರಿಗೂ ಧನ್ಯವಾದ :)

  ReplyDelete
 2. Nimmalliro kavi horag bandange kaanstide panditre :)

  - Srihari

  ReplyDelete
 3. awesome!!!! engineers lyfu istene!
  sooooooooooooper!!!
  aadre atte du 1nd comment-nimge vaarakke 2 dina naadru raje anta :(

  sooooper saalu........!!!-
  ಒಬ್ಬನಿಗೆ ತೆಲುಗು ಪಿಕ್ಚರ್ ಗೊತ್ತು.. ಇನ್ನೊಬ್ಬಳು
  ಮಾತೆತ್ತಿದರೆ jesus! ಮಗದೊಬ್ಬ
  ಕ್ಲೈಂಟ್ ಕೆಲಸವೇ ಕೈಲಾಸ ಎಂದು ಭಾವಿಸಿರುವ ನಮ್ಮ ಬಾಸ್.

  ಅಮೇರಿಕ ದಲ್ಲಿರುವ client ಗೆ ಬೆಳಕು ಹರಿದಿದೆ..
  ನಮಗಿನ್ನು ಸುಪ್ರಭಾತದ ಸಮಯ...
  ಮುಖವನ್ನೇ ನೋಡದೇ ಇಷ್ಟು ದಿನ
  ಅವನೊಡನೆ ಮಾತುಕತೆ...

  "ಕಡೆಯ ತನಕ ಮುಖ ತೋರಿಸದೇ
  ಮರೆಯಲ್ಲಿ ನಿಂತು ಮಾತನಾಡುವ ಹಳೆ ಕಾಲದ
  ಪಿಕ್ಚರ್ನ ಕೇಡಿಯೊಬ್ಬ ನೆನಪಾಾಗುತ್ತಾನೆ!
  ಪಿಕ್ಚರ್ ನ climax ನಲ್ಲಿ ಆಗುವಂತೆ
  ಯಾರಾದರೂ ಬಂದು ಅವನನ್ನ
  ಚಚ್ಚಿ ಹಾಕಬಾರದೇ ಎಂದುಕೊಳ್ಳುತ್ತೇನೆ!"

  - Anil Bhat Honnermane

  ReplyDelete
 4. This comment has been removed by the author.

  ReplyDelete
 5. 3ne para simply superb.Ravi belegere khas bath kinta cholo iddu.Change the title as software engineer Obanna bisi bele bath.

  - Deepthi Bhat

  ReplyDelete
 6. sooper maga ... chenagide.. ninna rodane ge nanna sampoorna bembala haagu anukampa :-P :-)

  - Girish Gowda

  ReplyDelete
 7. ಚೆನ್ನಾಗಿದೆ ಅಕ್ಷಯ್ ,
  ಒಬ್ಬ software ಇಂಜಿನಿಯರ್ ನ ದಿನಚರಿಯನ್ನು ತುಂಬಾ ಚೆನ್ನಾಗಿ ಹೇಳಿದ್ದಿಯ.

  ಅಮ್ಮ ಮನೆಗೆ ಬಂದವರ ಮುಂದೆ ಹೇಳ್ತಾ ಇರ್ತಾಳೆ
  ಈಗಿನ ಕಾಲದ ಹುಡುಗರಿಗೆ ಜನ ಬಳಕೆ ಕಡಿಮೆ...
  ನನ್ನದೇನಿದೆ ತಪ್ಪು.. ಇಂಜಿನಿಯರ್ ಆಗು ಅಂದವಳು ಅವಳೇ..
  ಈಗ ಬಳಕೆಯಲ್ಲಿರುವುದೇ ಅಷ್ಟು...

  ಈ ಮೇಲಿನ ನಿನ್ನ ಅಭಿಪ್ರಾಯಗಳಿಗೆ ನನ್ನ ವಿವರಣೆ ಬೇರಯದೇ ಇದೆ.
  ಅಮ್ಮ ಯಾವತ್ತು ಅವಳ ಮಕ್ಕಳು ಒಳ್ಳೆ ಬಾಳ್ವೆ ನಡೆಸಲಿ ಅಂತ ಬಯಸುತ್ತಾಳೆ, Software Engineers ಅಂದ್ರೆ ಕೈತುಂಬಾ ದುಡಿತಾರೆ, ತಾವು ಪಟ್ಟ ಕಷ್ಟ ತಮ್ಮ ಮಕ್ಕಳಿಗೆ ಇರಲ್ಲ ಅಂತ ಭಾವಿಸುತ್ತಾಳೆ.
  Software Engineers ಗೆ ಕಾಸಿಗೆ ಬರವಿಲ್ಲ, ಆದರೆ ಜೀವನದಲ್ಲಿ ನೆಮ್ಮದಿಗೆ ಬರ. ಈ ತರದ ಮಾನಸಿಕ ತೊಳಲಾಟದ ಬಗ್ಗೆ ಗೊತ್ತಿದ್ದರೆ ಅಮ್ಮ ಖಂಡಿತ ನಾವು Software Engineers ಆಗೋದು ಬಯಸುತ್ತಿರಲಿಲ್ಲ. ಆದರು ಬಂಧು ಬಳಗದವರು ಎದುರಾದಾಗ ನಮ್ಮ ಮಗ Software ಇಂಜಿನಿಯರ್ , ಇಷ್ಟು ಸಂಬಳ, ಇಷ್ಟು ಸಲ ಅಮೆರಿಕಾಗೆ ಹೋಗಿದ್ದಾನೆ....ಅಂತ ಹೇಳಿ ಸಂಭ್ರಮಿಸುತ್ತಾಳೆ...

  ಇನ್ನು ತಮಿಳು ಬಾಸ್ ಕರ್ನಾಟಕ ದಲ್ಲಿ ಘರ್ಜಿಸಲು ನಾವೇ ಕಾರಣಕರ್ತರು, ತಮಿಳು ಬಾಸ್ ತಮಿಳರಿಗೆ ಮಣೆ ಹಾಕಿದರೆ , ಕನ್ನಡಿಗರು so called talented ಅಂತ ಹೇಳಿ Anna university ಅಲ್ಲಿ ೮೦ - ೯೦ % ಪಡೆದ ಆದರೆ ಇಂಗ್ಲಿಷ್ ಮಾತಾಡಲು ಬರದೆ ಇರುವವರನ್ನು recruit ಮಾಡುತ್ತಾರೆ.

  - Deepak Kamath

  ReplyDelete
 8. hehehe....super !

  - Prabhanjan Badami

  ReplyDelete
 9. ಮಸ್ತ್ ಮಸ್ತ್ ಮಸ್ತಲೊ...... ರಾಶಿ ಚೆ೦ದ ಆಯ್ದು.... ಹೀ೦ಗೆ ಬರೀತಾ ಇರು... ಓದ್ತಾ ಇರ್ತೆ..

  ReplyDelete
 10. Awesome !! ಸಕತ್ ಆಗಿ ಇದೇ....

  Software Engineer ಜೀವನ ವೇ ಒಂದು BUG ಸುತಾ
  Fix ಮಾಡಲು 5-6 ಮಂದಿ
  Test ಮಾಡಲು 2-3 ಮಂದಿ
  Status ಕೇಳಲು 10 ಮಂದಿ

  ಕೊನೆಗೂ ಆ BUG ಬರುವುದು ಮಾತೊಂದು ವೇಷ ಧರಸಿ

  ReplyDelete
 11. ಅಮೇರಿಕ ದಲ್ಲಿರುವ ಕ್ಲೈಂಟ್ ಗೆ ಬೆಳಕು ಹರಿದರೆ
  ನಮಗದು ಸುಪ್ರಭಾತದ ಸಮಯ...
  ಮುಖವನ್ನೇ ನೋಡದೇ ಇಷ್ಟು ದಿನ
  ಅವನೊಡನೆ ಮಾತುಕತೆ...
  ಕಡೆಯ ತನಕ ಮುಖ ತೋರಿಸದೇ
  ಮರೆಯಲ್ಲಿ ನಿಂತು ಮಾತನಾಡುವ ಹಳೆ ಕಾಲದ
  ಪಿಕ್ಚರ್ನ ಕೇಡಿಯೊಬ್ಬ ನೆನಪಾಾಗುತ್ತಾನೆ!

  :P maja ide.. mattashTu bari and frequent aagi :)

  ReplyDelete