ಸೆಪ್ಟೆಂಬರ್ 14, 2012

ನದಿ ಮತ್ತು ಬದುಕು







ನದಿ ಚೆಲುವೆ!
ಮೈ ಮರೆಯುತ್ತಾ
ತನ್ನಿಷ್ಟದಂತೆ ಕುಣಿಯುತ್ತಾ
ಒಮ್ಮೆ ಹುಚ್ಚು ಪ್ರವಾಹ ಎಬ್ಬಿಸುತ್ತಾ
ಮಗದೊಮ್ಮೆ ತಣ್ಣಗಾಗುತ್ತಾ
ನೋಡಿದಷ್ಟೂ ನೋಡಬೇಕೆನ್ನಿಸುವ ಸೊಗಸು
ಸಾಗರನ ಸೇರುವ ಕಾತುರತೆ
ಸೇರಿದೊಡನೆ ಒಂದು ಬಿಸಿ ಅಪ್ಪುಗೆ !!


ನದಿ ವಿರಹಿ!
ತನ್ನ ಸಖ ಮಳೆ ಸುರಿಸದೇ ದಿನವೆಷ್ಟಾಯ್ತೋ!
ಅವನಿಗಾಗಿ ಕಾದು ಕಾದು ಸೊರಗಿ ಹೋಗಿದ್ದರೂ
ಬಂದೆ ಬರುತ್ತಾನೆನ್ನೋ ಭರವಸೆ
ಕಡೆಗೂ ಅವನೊಂದು ದಿನ
ಪ್ರೀತಿ ಮಳೆ ಸುರಿಸಿದಾಗ
ನದಿ ಉತ್ಸಾಹದ ಚಿಲುಮೆ
ಪಾರವಿಲ್ಲ ಅವಳ ಪ್ರೀತಿ ರಭಸಕ್ಕೆ !!


ನದಿ ಹೆಣ್ಣು !
ಪ್ರತಿದಿನವೂ ಹೊಸದಾರಿ
ಹಾದಿಯುದ್ದಕ್ಕೂ ಸಂಘರ್ಷ
ಆದರೂ ಮಮತೆ ಮರೆತಿಲ್ಲ
ಉಪಕಾರ ಪಡೆದವರ ಲೆಕ್ಕವಿಲ್ಲ
ಸಾಗರ ಸೇರುವಾಗಲೂ ನೋವು ನಿಂತಿಲ್ಲ
ಅಲೆಗಳೊಂದಿಗೆ ತಾಕಾಟ, ಅಲ್ಲೂ ಹೋರಾಟ
ಸಂಘರ್ಷದಿಂದ ಬಿಡುಗಡೆಯಿಲ್ಲ !!


ನದಿ ಯೋಗಿ !
ಹುಟ್ಟಿದ ಊರಿನ ಹಂಗಿಲ್ಲ 
ನಿಂತ ನೆಲೆಯ ಋಣ ಇಲ್ಲ
ನಡೆದದ್ದೇ ದಾರಿ
ಗಮ್ಯದ ಹುಡುಕಾಟ
ಪಯಣ ಮಾತ್ರ ನಿರಂತರ 
ಸಾಗರ ಸೇರಿ ಪ್ರಶಾಂತವಾದ ನಂತರ
ಅದೊಂದು ಸಾರ್ಥಕ ಕ್ಷಣ! ಮುಕ್ತಿ ಭಾವ !


ನದಿ ನಿತ್ಯ ನೂತನ!
ವೈವಿಧ್ಯಗಳ ಅನಾವರಣ
ನಮ್ಮದೇ ಪ್ರತಿಬಿಂಬ
ಬದುಕಿನ ನಿಲುವುಗನ್ನಡಿ
ಪ್ರತಿ ಜೀವವೂ
ಒಂದೊಂದು ರೀತಿ
ಬಾಳುವ ಬಗೆಗೆ
ನದಿ ಸ್ಪೂರ್ತಿ !!



-
ಅಕ್ಷಯ ಪಂಡಿತ್, ಸಾಗರ

15 ಕಾಮೆಂಟ್‌ಗಳು:

  1. ಇದನ್ನು ಬರೆದು ಎಲ್ಲರಿಗೂ ಮೈಲ್ ಮಾಡಿದಾಗ ಬಂದ ಪ್ರತಿಕ್ರಿಯೆಗಳು ಸ್ಪೂರ್ತಿ ತುಂಬಿವೆ. ಪ್ರೋತ್ಸಾಹ ಕೊಟ್ಟಿವೆ.
    ಮೈಲ್ ನಲ್ಲೇ ಇಟ್ಟು ಇದನ್ನೆಲ್ಲ ಮರೆಯುವ ಬದಲು ಹೊಸತಾಗಿ ಶುರು ಮಾಡಿದ ಈ ಬ್ಲಾಗ್ ನಲ್ಲಿ ಕಾಮೆಂಟ್ ರೂಪದಲ್ಲಿ ಪೋಸ್ಟ್ ಮಾಡಿದ್ದೇನೆ.
    ಓದಿದ, ಇಷ್ಟಪಟ್ಟ, ಸಲಹೆ ಕೊಟ್ಟ ಎಲ್ಲರಿಗೂ ಧನ್ಯವಾದ :)

    ಪ್ರತ್ಯುತ್ತರಅಳಿಸಿ
  2. Very well written.
    Thumba apt aagi iddhu comparision. Nadhi matthu Badhuku :-)

    - Shishir Thalner

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಸೂಪರ್..... ಚೆ೦ದ ಚೆ೦ದ... ಯೋಗರಾಜ್ ಭಟ್ರ ಶಿಷ್ಯ ಅಪ್ಪುಲಡ್ಡಿಲ್ಲೆ... by chance ಇದನ್ನೆಲ್ಲಾ ಭಟ್ರು ಓದಿದ್ರೆ next filmನಲ್ಲಿ ನಿನಗೆ ಅವಕಾಶ ಕಟ್ಟಿಟ್ಟ ಬುತ್ತಿ...

    ಪ್ರತ್ಯುತ್ತರಅಳಿಸಿ
  5. wow super agide maga .... bhatru sisya aago sakath famous agtya ...sakathagidyallo maraya :-)

    - Sagar Sridhar

    ಪ್ರತ್ಯುತ್ತರಅಳಿಸಿ
  6. ಅಕ್ಷಯ್,
    Great.
    ನದಿ ಬಗ್ಗೆ ಬರೆದ ನಿನ್ನ ಈ ಕವಿತೆ, ನದಿಯನ್ನು ವಿಧ ವಿಧವಾಗಿ ಬೇರೆ ಬೇರೆ ವ್ಯಕ್ತಿತ್ವಕ್ಕೆ ಹೋಲಿಸಿರುವುದು ಅತ್ಯಂತ ಸೂಕ್ತವಾಗಿದೆ. ನದಿಯನ್ನು ಬದುಕಿಗೆ ಹೊಲಿಸಿರುವುದಲ್ಲದೇ, ಅದನ್ನು ವಿಸ್ತಾರವಾದ ಉದಾಹರಣೆಯೊಂದಿಗೆ Justify ಮಾಡಿಕೊಂಡಿರುವುದು ನಿನ್ನ ಸೃಜನಶಿಲತೆಯನ್ನು ತೋರಿಸುತ್ತದೆ.
    I am not too big to comment on this beautiful poem, but I can appreciate it.
    Carry on.. I wish the poet in you should come out with more poems, more stories like this in future.

    Regards
    Deepak Kamath

    ಪ್ರತ್ಯುತ್ತರಅಳಿಸಿ
  7. Akshay... suuper.. :)

    neen yavaga kavi aadhe??? chennagide parikalpane...

    ಸಾಗರ ಸೇರಿ ಪ್ರಶಾಂತವಾದ ನಂತರ
    ಅದೊಂದು ಸಾರ್ಥಕ ಕ್ಷಣ!! ಮುಕ್ತಿ ಭಾವ !
    gurugala chaapu idhe. :)

    innu aneka kavitegaLu hora barali...

    - Supriya S

    ಪ್ರತ್ಯುತ್ತರಅಳಿಸಿ
  8. Fantastic Akshay!!!!!!! chuparustum nivu....sangeeta sagaradalli sahityada hole hariutteede yendu gottirallila...tunba channagide....
    best wishes

    - Jyothi Shyam

    ಪ್ರತ್ಯುತ್ತರಅಳಿಸಿ
  9. Rasikathana yembhudhu janasidhe Malenaadinalli.....idhare proof, is this poem....

    My favorite lines -
    ಆಹಾ!! ಅವಳ ಬಿಂಕ ನೋಡುವುದೇ ಒಂದು ಸೊಗಸು
    ಸಾಗರನ ಸೇರುವ ಕಾತುರತೆ
    ಸೇರಿದೊಡನೆ ಒಂದು ಬಿಸಿ ಅಪ್ಪುಗೆ !! --- brilliant imagination :)

    - Prabhanjan Badami

    ಪ್ರತ್ಯುತ್ತರಅಳಿಸಿ
  10. ಅದ್ಬುತ ಹೊಲಿಕೆ !!
    Hidden talent of Akshay...

    ಎದ್ಹಕೆ ಸುಪ್ರ್ತಿ ಯಾರು ???

    ಸಾರಾಂಶ :)

    ನದಿ ಹಠವಾದಿ !
    ತನ್ನ ಗುರಿ ತಲುಪಲು,
    ಎಷ್ಟು ಅಡ್ಡೆ ತಡ್ದೆ ಇದರು ಎದರಿಸುತೆ
    ಹಾಗೆ ನಮ್ಮ ಬದುಕಿನ ಎಸ್ಟೆ ಕಷ್ಟಗಳು ಇದರು,
    ಎಲಾವನ ಎದರಿಸಬೇಕು
    ಜಯಸಬೇಕು.

    ಪ್ರತ್ಯುತ್ತರಅಳಿಸಿ
  11. ಬ್ಲಾಗ್‌ನ ನಿರ್ವಾಹಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  12. ಬದುಕುವ ಬಗೆ ಹಲವು, ಬದುಕ ನೋಡುವ ಬಗೆ ಹಲವು
    ವೈವಿಧ್ಯಗಳ ಅನಂತತೆ

    Wa Wa. bahaLa chennagide :-)
    You write really well :-)

    ಪ್ರತ್ಯುತ್ತರಅಳಿಸಿ