ಅಕ್ಟೋಬರ್ 5, 2012

ಖುಷಿಯ ವಿಚಾರಹರವಿಕೊಂಡು ಕೂತಿದ್ದೆ ನೂರಾರು ಕನಸು
ನಿನ್ನ ನೋಡುವ ಮೊದಲು..
ಆಮೇಲೆಲ್ಲಾ ನಿನ್ನದೊಂದೇ ಕನಸು
ಉಳಿದವೆಲ್ಲಾಬರಿ ಕಾಗದದಲ್ಲೇ
ಉಳಿದು ಹೋದ ಸಾಲು...

ಶಹರದ ಕೋಟೆಯ ಮೇಲೆ ಹತ್ತಿ
ರಾಜನಂತೆ ಮೆರೆಸಿ ರಾಣಿಯಂತೆ ಮೆರೆದಾಕೆ..
ಕೋಟೆಯ ತುದಿಯಲ್ಲಿ ನಿಂತು
ನಗಾರಿ ಬಾರಿಸುವುದೊಂದೇ  ಬಾಕಿ
ಹೊಸ ಮನ್ವಂತರದ ಆರಂಭಕೆ...

ಇದ್ದಕ್ಕಿದ್ದಂತೆ ಕೊನೆಯಾಯಿತು
ಜೊತೆ ನಡೆದ ಹಾದಿ...
ಅವನೇ ಎಳೆದೊಯ್ದನೋನೀನೇ
ತಲೆಯಾಡಿಸಿ ಹಿಂದೆ ಹೊದೆಯೋ
ಎಲ್ಲಾ ಅಸ್ಪಷ್ಟ ಚಿತ್ರ.. 

ಕಡಲ ಕಿನಾರೆಯಲಿ ಹುಚ್ಚು ಮಳೆ
ನನ್ನೆದೆಯಲ್ಲಿ ಭೋರ್ಗರೆತ...
ನಿನ್ನಪ್ಪಅಲೆಗಳಷ್ಟೇ ನಿರ್ದಯಿ
ಕಾರಣ ಬೇಕಿಲ್ಲನನ್ನಿಂದ ನೀ
ದೂರಾದದ್ದೊಂದೇ ವಿಧಿತ...

ಕೋಟೆಯ ಶಿಥಿಲ ಗೋಡೆಗಳಿನ್ನೂ
ಕಥೆ ಹೇಳುತ್ತಿವೆ.. ಕೇಳುವವರ್ಯಾರಿಲ್ಲ..
ಇನ್ನೇನಿದ್ದರೂ
ನಿನ್ನದು ನೆನಪು ಮಾತ್ರ
ಮತ್ತೆ ಸಿಗುವೆಯೆಂಬ ಕನಸಿಲ್ಲ..


ಆದರೆ ಖುಷಿಯ ವಿಚಾರ ಕೇಳು... 
ಮತ್ತೆ ಮರುಜನ್ಮ ತಳೆದಿದೆ ನೂರಾರು ಕನಸು.... 
ಎಲ್ಲಕ್ಕೂ ಸ್ಪೂರ್ತಿ ನೀನೆ... ನಿನ್ನ ಮೇಲಿನ
ಹಠ... ಮುನಿಸು... 


-
ಅಕ್ಷಯ ಪಂಡಿತ್ಸಾಗರ


5 ಕಾಮೆಂಟ್‌ಗಳು:

  1. ಅಕ್ಷಯ್ ಪಂಡಿತರೆ,

    ಹೆಸರಿಗೆ ತಕ್ಕಂತೆ ಪಂಡಿತರೆ ತಾವು....
    ತುಂಬಾ ಚೆನ್ನಾಗಿದೆ... ಈ ಕವಿತೆಯನ್ನ ಓದಿ ನನ್ನಾಸೆಯ ನನ್ನಾಕೆಯ ನೆನಪಾಯಿತು :-)

    ಪ್ರತ್ಯುತ್ತರಅಳಿಸಿ
  2. Akshay,e kavana Fantaboulus.Modliana 4 para bari besara,alu Konagina para- yella bhagna premigaligu,jeevana dalli hosa hurupannu huttsuva salugalu

    ಪ್ರತ್ಯುತ್ತರಅಳಿಸಿ